ಸಾಲುಗಳಲ್ಲಿ ನಿಲ್ಲುವದನ್ನು ಮರೆತುಬಿಡಿ, ಈಗ ನಿಮ್ಮ ಕೈ ಬೆರಳಲ್ಲೇ ಓಪಿಡಿ ನೋಂದಣಿ ಮಾಡಿ.

ದಂಡು ಮಂಡಲಿ (ಕಂಟೋನ್ಮೆಂಟ್ ಬೋರ್ಡ್) ಬೆಳಗಾವಿ ಇವರು  ದಂಡು ಮಂಡಲಿ ಸಾಮಾನ್ಯ (ಕಂಟೋನ್ಮೆಂಟ್ ಜನರಲ್) ಆಸ್ಪತ್ರೆಯಲ್ಲಿ  ಓಪಿಡಿ ನೋಂದಣಿ (ಅಪ್ಪೋಯಿಂಟ್ಮೆಂಟ್) ತೆಗೆದುಕೊಳ್ಳಲು ಆನ್‌ಲೈನ್  ಸೇವೆಯನ್ನು ಪ್ರಾರಂಭಿಸಿದೆ.   ಪೂರ್ವಭಾವಿ ನೋಂದಣಿ (ಅಪ್ಪೋಯಿಂಟ್ಮೆಂಟ್)  ತೆಗೆದುಕೊಳ್ಳಲು ನಾಗರಿಕರು  www. Belgaumcantt.gov.in ವೆಬ್‌ಸೈಟ್ ಗೆ ಹೋಗಿ ತಮ್ಮ ಹೆಸರನ್ನು ನೋಂದಾಯಿಸಬಹುದು.

ಆನ್‌ಲೈನ್ ನೋಂದಣಿ (ಅಪ್ಪೋಯಿಂಟ್ಮೆಂಟ್) ಗಳನ್ನು ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 9 ರಿಂದ 11 ರವರೆಗೆ ತೆಗೆದುಕೊಳ್ಳಬಹುದು.

ನೋಂದಣಿ ಮಾಡದೇ ಇರುವ ರೋಗಿಗಳು ನೋಂದಣಿ (ಅಪ್ಪೋಯಿಂಟ್ಮೆಂಟ್) ಗಳನ್ನು  ಸೋಮವಾರದಿಂದ ಶನಿವಾರದವರೆಗೆ  ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ  ಪಡೆಯಬಹುದು.